225ರೂ.ಗೆ ಕರೊನಾ ಔಷಧ?: 10 ಕೋಟಿ ಡೋಸೇಜ್ ತಯಾರಿಸಲಿರುವ ಸೇರಂ ಇನ್​ಸ್ಟಿಟ್ಯೂಟ್

ನವದೆಹಲಿ: ಭಾರತದಲ್ಲಿ ಕರೊನಾ ಔಷಧವನ್ನು 225 ರೂಪಾಯಿಗೆ ಮಾರಾಟ ಮಾಡಲಾಗುವುದು ಎಂದು ಸೇರಂ ಇನ್​ಸ್ಟಿಟ್ಯೂಟ್ ತಿಳಿಸಿದೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಔಷಧವನ್ನು ಉತ್ಪಾದನೆ ಮಾಡಲಾಗುತ್ತಿದ್ದು, ದೇಶದ ಬಡವರಿಗೂ ಔಷಧ ತಲುಪುವಂತೆ ನೋಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

ಆಕ್ಸ್​ಫರ್ಡ್ ವಿವಿಯ ಔಷಧವನ್ನು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಸೇರಂ ಇನ್​ಸ್ಟಿಟ್ಯೂಟ್ ತಯಾರಿಸುತ್ತಿದೆ. ಔಷಧದ ಉತ್ಪಾದನೆಗಾಗಿ ಬಿಲ್ ಆಂಡ್ ಮೆಲಿಂದಾ ಗೇಟ್ಸ್ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸೇರಂ ತಿಳಿಸಿದೆ. ಪ್ರತಿಷ್ಠಾನದಿಂದ 150 ಮಿಲಿಯನ್ ಡಾಲರ್​ನ್ನು ಪಡೆದುಕೊಂಡಿದ್ದು, 100 ಮಿಲಿಯನ್ ಡೋಸೇಜ್ ಔಷಧವನ್ನು ತಯಾರಿಸ ಲಾಗುತ್ತಿದೆ. ವಿಶ್ವಾದ್ಯಂತ ಒಟ್ಟು 92 ದೇಶಗಳಲ್ಲಿ ಔಷಧವನ್ನು ಮಾರಾಟ ಮಾಡಲಾಗುವುದು ಎಂದು ಸೇರಂ ಇನ್​ಸ್ಟಿಟ್ಯೂಟ್ ತಿಳಿಸಿದೆ.

9 ದಿನದಲ್ಲಿ 5 ಲಕ್ಷ ಪ್ರಕರಣ: ಭಾರತದಲ್ಲಿ ಕೇವಲ 9 ದಿನಗಳಲ್ಲಿ ಐದು ಲಕ್ಷ ಕರೊನಾ ಸೋಂಕು ದೃಢಪಟ್ಟಿದೆ. ಜುಲೈ 17ರಂದು 10 ಲಕ್ಷ ದಾಟಿದ್ದ ಪ್ರಕರಣ ಮೂರು ವಾರಗಳಲ್ಲಿ ದುಪ್ಪಟ್ಟಾಗಿದೆ. ಜುಲೈ 28ರಂದು ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿತ್ತು. ಅದಾದ ನಂತರ ಕೇವಲ ಒಂಬತ್ತು ದಿನಗಳಲ್ಲಿ 4.95 ಲಕ್ಷದಷ್ಟು ಪ್ರಕರಣಗಳು ವರದಿಯಾಗಿವೆ. ಕರೊನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈ ಒಂಬತ್ತು ದಿನಗಳಲ್ಲಿ 5.19 ಲಕ್ಷ ಪ್ರಕರಣಗಳು

Read Full Article Here

Continue Reading

ಪೆಟ್ರೋಲ್-ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಯಾವ ನಗರದಲ್ಲಿ ಎಷ್ಟಿದೆ?

ನವದೆಹಲಿ: ಸರ್ಕಾರಿ ತೈಲ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿ, ಮುಂಬೈ ಮತ್ತು ಚೆನ್ನೈ ಮತ್ತು ಕೋಲ್ಕತ್ತಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಆಗಸ್ಟ್‌ನಲ್ಲಿ ತೈಲ ಬೆಲೆಗಳು ಇಲ್ಲಿಯವರೆಗೆ ಯಾವುದೇ ಬದಲಾವಣೆ ಕಂಡಿಲ್ಲ. ಇದಕ್ಕೂ ಮೊದಲು ಜುಲೈ ತಿಂಗಳಲ್ಲಿ ಡೀಸೆಲ್ ಬೆಲೆಯನ್ನು 10 ಬಾರಿ ಹೆಚ್ಚಿಸಲಾಗಿದೆ. ಮತ್ತೊಂದೆಡೆ, ಇನ್ನು ಪೆಟ್ರೋಲ್ ಒಂದು ತಿಂಗಳಿಗಿಂತ ಹೆಚ್ಚು ಕಾಲ ಹೆಚ್ಚಿಲ್ಲ. ಪೆಟ್ರೋಲ್ ಬೆಲೆ ಕೊನೆಯದಾಗಿ ಏರಿಕೆಗೊಂಡಿದ್ದು ಜೂನ್ 29 ರಂದು, ಅದು ಕೂಡ ಪ್ರತಿ ಲೀಟರ್‌ಗೆ 5 ಪೈಸೆ ಮಾತ್ರ. ಆದರೆ ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಇತ್ತು.

ದೆಹಲಿ ಪೆಟ್ರೋಲ್ 80.43 ಮತ್ತು ಡೀಸೆಲ್ 73.56 ರೂ. ಮುಂಬೈ ಪೆಟ್ರೋಲ್ ಬೆಲೆ 87.19 ರೂ. ಮತ್ತು ಡೀಸೆಲ್ 80.11 ರೂ. ಕೋಲ್ಕತಾ ಪೆಟ್ರೋಲ್ ರೂ 82.05 ಮತ್ತು ಡೀಸೆಲ್ ರೂ 77.06 ಲೀಟರ್. ಚೆನ್ನೈ ಪೆಟ್ರೋಲ್ ಬೆಲೆ 83.63 ಮತ್ತು ಡೀಸೆಲ್ ಬೆಲೆ 78.86 ರೂ. ಬೆಂಗಳೂರು ಪೆಟ್ರೋಲ್ ಪ್ರತಿ ಲೀಟರ್‌ಗೆ 83.11 ಮತ್ತು ಡೀಸೆಲ್ ಲೀಟರ್‌ಗೆ 77.88 ರೂ.

Read more at: https://kannada.oneindia.com/news/business/today-petrol-and-diesel-prices-no-big-changes-198956.html

Continue Reading

ಶ್ರೀದೇವಿ ಪುತ್ರಿ ಜಾನ್ವಿಗೆ ಎದುರಾಗಿದೆ ಬಹಿಷ್ಕಾರ ಕಂಟಕ! ದೇಶಭಕ್ತಿ ಸಿನಿಮಾ ಮಾಡಿದ್ರೂ ತಪ್ಪದ ಸಂಕಟ!

ಕಾರ್ಗಿಲ್‌ ಯುದ್ಧ ಭೂಮಿಯಲ್ಲಿ ಹೋರಾಡಿದ ಯುವತಿಯ ಪಾತ್ರದಲ್ಲಿ ಜಾನ್ವಿ ಕಪೂರ್‌ ನಟಿಸಿದ್ದಾರೆ. ಹಾಗಿದ್ದರೂ ಅವರ ಹೊಸ ಚಿತ್ರಕ್ಕೆ ಬಹಿಷ್ಕಾರದ ಬಿಸಿ ತಟ್ಟುವ ಸಂಭವ ಎದುರಾಗಿದೆ. ಆ ಬಗ್ಗೆ ಇಲ್ಲಿದೆ ಫುಲ್ ಡಿಟೇಲ್ಸ್‌…

ಹಿಂದಿ ಚಿತ್ರರಂಗದಲ್ಲಿ ಸದ್ಯಕ್ಕಂತೂ ವಾತಾವರಣ ಗರಂ ಆಗಿದೆ. ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಹೊರಿಸುತ್ತ ಕಾಲ ಕಳೆಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತ ತಾಂಡವ ಆಡುತ್ತಿದೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ನೆಪೋಟಿಸಂ ಕಾರಣದಿಂದ ಚಾನ್ಸ್‌ ಗಿಟ್ಟಿಸಿಕೊಂಡ ಅನೇಕ ಕಲಾವಿದರ ಸಿನಿಮಾಗಳಿಗೆ ಇದರಿಂದ ಕಂಟಕ ಎದುರಾಗುತ್ತಿದೆ.

ಭಾರತೀಯ ಸಿನಿಮಾ ರಂಗದ ದಿಗ್ಗಜ ನಟಿ ಶ್ರೀದೇವಿ ಅವರ ಮೊದಲ ಪುತ್ರಿ ಜಾನ್ವಿ ಕಪೂರ್‌ ಅವರು ‘

ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗರ್ಲ್‌’ ಸಿನಿಮಾದಲ್ಲಿ ನಟಿಸಿದ್ದು, ಆ.12ರಂದು ಆ ಚಿತ್ರ ಬಿಡುಗಡೆ ಆಗಲಿದೆ. ನೇರವಾಗಿ ಆನ್‌ಲೈನ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಜಾನ್ವಿ ಕಪೂರ್‌ ಕೂಡ ನೆಪೋಟಿಸಂನ ಫಲಾನುಭವಿ ಎಂಬ ಕಾರಣಕ್ಕೆ ಅವರ ಈ ಸಿನಿಮಾವನ್ನು ಬ್ಯಾನ್‌ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ನೆಪೋಟಿಸಂನ ರಾಯಭಾರಿ ಎಂದೇ ಟೀಕಿಸ್ಪಡುವ ಕರಣ್‌ ಜೋಹರ್‌ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ನೆಟ್‌ಫ್ಲಿಕ್ಸ್‌ ಮೂಲಕ ‘ಗುಂಜನ್‌ ಸಕ್ಸೇನಾ’ ರಿಲೀಸ್‌ ಆಗಲಿದೆ. ಈಗಾಗಲೇ ಟ್ರೇಲರ್‌ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಜಾನ್ವಿಗೆ ನಟನೆಯೇ ಬರುವುದಿಲ್ಲ. ಆಕೆ ಕಳಪೆ ನಟಿ’ ಎಂಬಿತ್ಯಾದಿ ಕಾಮೆಂಟ್‌ಗಳು ಕೂಡ ಬಂದಿವೆ. ಹಾಗಾಗಿ ಸಿನಿಮಾದ ಭವಿಷ್ಯ ಏನಾಗಲಿದೆಯೋ ಎಂಬ ಚಿಂತೆ ಜಾನ್ವಿ ಅವರನ್ನು ಕಾಡುತ್ತಿರಬಹುದು. ಈ ಚಿತ್ರಕ್ಕೆ ಶರಣ್‌ ಶರ್ಮಾ ನಿರ್ದೇಶನ ಮಾಡಿದ್ದಾರೆ.

Read Full Article Here

Continue Reading

ಅಯೋಧ್ಯೆ ಬೀಗ ತೆರೆಯುವುದಕ್ಕೆ ಮುನ್ನ ರಾಜೀವ್ ಗಾಂಧಿ ಮಾಡಿದ ಡೀಲ್ ಏನಾಗಿತ್ತು!!!

ತಿರುವನಂತಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮ ಹತ್ತಿರ ಇದ್ದಾಗ ಪ್ರಮುಖ ಕಾಂಗ್ರೆಸ್ ನಾಯಕರು ಹಿಂದುಪರ ನಿಲುವು ತೋರತೊಡಗಿದ್ದು ಗಮನಸೆಳೆದಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಕಮಲನಾಥ್​ ಮುಂತಾದವರ ನಡೆಯ ಹಿಂದೆ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಇರಾದೆ ಇದ್ದುದನ್ನು ಜನ ಗಮನಿಸಿದ್ದರು. ಆಗಸ್ಟ್ 5 ರಾಷ್ಟ್ರೀಯ ಏಕತೆಯ ದಿನ ಎಂದೆಲ್ಲ ಅವರು ಕೊಂಡಾಡಿದ್ದರು.

ಅಷ್ಟೇ ಅಲ್ಲ 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬಾಬರಿ ಮಸೀದಿಯ ಬೀಗ ತೆರೆದು ಶ್ರೀರಾಮಲಲ್ಲಾನ ಪೂಜೆಗೆ ಅವಕಾಶ ಮಾಡಿಕೊಟ್ಟದ್ದು, ಅಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದನ್ನೂ ಕಾಂಗ್ರೆಸ್ಸಿಗರು ಪ್ರಸ್ತಾಪಿಸಿದ್ದರು. ರಾಮಮಂದಿರ ನಿರ್ಮಾಣಕ್ಕೆ ನಾವು ಅಡ್ಡಿಯಾಗಿರಲಿಲ್ಲ ಎಂದೂ ಸಮಜಾಯಿಷಿ ಕೊಡತೊಡಗಿದ್ದು ಕಂಡುಬಂತು. ಈ ನಡುವೆ, ಕೇರಳದ ರಾಜ್ಯಪಾಲರಾಗಿರುವ ಆರೀಫ್ ಮೊಹಮ್ಮದ್ ಖಾನ್ ಅವರ ಸಂದರ್ಶನ ಆಂಗ್ಲ ಸುದ್ದಿಮಾಧ್ಯಮದಲ್ಲಿ ಪ್ರಕಟವಾಗಿದ್ದು, ರಾಜೀವ್ ಗಾಂಧಿ ಬಾಬರಿ ಮಸೀದಿ ಬೀಗ ತೆರೆದ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ.

Read Full Article Here

Continue Reading

ನಾನು ಕೆತ್ತಿದ ಮೂರ್ತಿ ಮೋದಿ ಕೈಲಿ ನೋಡಿ ಕಣ್ಣೀರು ಬಂತು!

ಬೆಂಗಳೂರು(ಆ.06): ‘ದೇಶದ ಪ್ರಧಾನಿಯೊಬ್ಬರಿಗೆ ನನ್ನ ಕೈಯಲ್ಲಿ ಮೂಡಿರುವ ಕೋದಂಡರಾಮನ ಮೂರ್ತಿ ನೀಡಿರುವುದು ನನ್ನ ಸೌಭಾಗ್ಯ. ಮೂರ್ತಿಯನ್ನು ಪ್ರಧಾನಿ ಕೈಯಲ್ಲಿ ಕೊಟ್ಟಾಗ ನನಗೆ ಆನಂದ ಬಾಷ್ಪವೇ ಬಂತು. ನನ್ನ ಹಲವು ವರ್ಷಗಳ ಕಾಯಕಕ್ಕೆ ಸಾರ್ಥಕ ಭಾವ ಮೂಡಿದೆ. ಇಂದಿನ ದಿನ ದೊಡ್ಡ ಪ್ರಶಸ್ತಿ ಬಂದಂತಾಗಿದೆ.’

ಹೀಗೆಂದು ಭಾವುಕರಾದವರು ಬೆಂಗಳೂರಿನ ನಾಗದೇವನಹಳ್ಳಿಯ ಕೆಂಗೇರಿ ನಿವಾಸಿ ಶಿಲ್ಪಿ ರಾಮಮೂರ್ತಿ.

ರಾಮಮಂದಿರ ಶಿಲಾನ್ಯಾಸದ ನಂತರ ಅಮಿತ್ ಶಾ ಹೇಳಿದ ‘ಸುವರ್ಣ’ ಮಾತು!

ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರಿಗೆ ಕರ್ನಾಟಕದ ಶಿಲ್ಪಿಯ ಕೈಯಲ್ಲಿ ಅರಳಿದ ಕೋದಂಡರಾಮನ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಧಾನಿಗೆ ಕೊಡುಗೆಯಾಗಿ ನೀಡಿದ ಮೂರ್ತಿಯನ್ನು ತಯಾರಿಸಿದವರು ರಾಮಮೂರ್ತಿ. ಉತ್ತರ ಪ್ರದೇಶ ಸರ್ಕಾರದ ಬೇಡಿಕೆ ಮೇರೆಗೆ ಕೋದಂಡರಾಮನ ಮೂರ್ತಿ ನಿರ್ಮಿಸಲಾಗಿತ್ತು.

Read Full Article Here

Continue Reading